ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ಈ ಪ್ರಪಂಚದಲ್ಲಿ ಚಾಣಾಕ್ಷತನದಿಂದ ಬದುಕುವುದು ಹೇಗೆ ಎಂಬುವುದನ್ನು ತಿಳಿಸಿದ್ದಾರೆ. ಈ ಪುಸ್ತಕವನ್ನು ಓದುವುದರಿಂದ ಈ ಪ್ರಪಂಚದಲ್ಲಿ ಅತ್ಯಂತ ಸರಳವಾಗಿ ವ್ಯವಹರಿಸಬಹುದು.
ಜ್ಞಾನಯೋಗಿ ಅವರು ಇದುವರೆಗೆ 150 ಕಥೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಎರಡು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಅವುಗಳಲ್ಲಿ ಇದು ಮೊದಲನೆ ಪುಸ್ತಕ. ಈ ಕಥೆಗಳ ಮೂಲಕ ಅವರು ಬದುಕಿನ ಉನ್ನತ ಮೌಲ್ಯಗಳನ್ನು ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ಅವರ ನಿರೂಪಣೆ ಎಷ್ಟು ಆಸಕ್ತಿಕರವಾಗಿದೆ ಎಂದರೆ ಆ ಕಥೆಗಳ ಸಾರಾಂಶ ಓದುಗರ ನೇರವಾಗಿ ಓದುಗರ ಹೃದಯವನ್ನು ತಲುಪುತ್ತದೆ.
ಈ ಪುಸ್ತಕವು ಜ್ಞಾನಯೋಗಿ ಅವರು ಬರೆದಿರುವ ಅದ್ಭುತ ಹಾಗೂ ಆಸಕ್ತಿಕರ ಕಥೆಗಳಲ್ಲಿನ ಎರಡನೇ ಭಾಗ. ಈ ಕಥೆಗಳ ನಿರೂಪಣಾ ವಿಧಾನ ಎಷ್ಟು ಸ್ವಾರಸ್ಯಕರವಾಗಿದೆ ಎಂದರೆ ಪ್ರತಿಯೊಬ್ಬ ಓದುಗರೂ ಈ ಕಥೆಗಳನ್ನು ಓದುತ್ತಾ ಆನಂದಿಸುತ್ತಾರೆ. ಓದುತ್ತಾ ಓದುತ್ತಾ ತಮಗೆ ತಿಳಿಯದಂತೆಯೇ ಜ್ಞಾನವನ್ನು ಆರ್ಜಿಸುತ್ತಾ ಹೋಗುತ್ತಾರೆ.
ಮಾನವರಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಆಧ್ಯಾತ್ಮಿಕ ಹಾಗೂ ವೇದಾಂತ ವಿಚಾರಗಳನ್ನು ಅರಿಯಬೇಕಾಗಿರುವುದು ತುಂಬಾ ಅವಶ್ಯಕ. ಆದರೆ ಅನೇಕ ಜನರು ಆಧ್ಯಾತ್ಮಿಕ ವಿಚಾರ ಹಾಗೂ ವೇದಾಂತ ವಿಚಾರಗಳೆಂದರೆ ವಿರಕ್ತಿಯನ್ನು ಪ್ರದರ್ಶಿಸುತ್ತಾರೆ. ಆದರೆ ಜ್ಞಾನಯೋಗಿ ಅವರ ಬರವಣಿಗೆಯ ಶೈಲಿಯನ್ನು ನೋಡಿದ ಬಳಿಕ ಆಧ್ಯಾತ್ಮಿಕ ಹಾಗೂ ವೇದಾಂತ ವಿಚಾರಗಳೂ ಸಹ ಇಷ್ಟೊಂದು ಆಸಕ್ತಿಕರವಾಗಿ, ಆನಂದಕರವಾಗಿ ಇರುವುದೆ! ಎಂದು ಅಶ್ಚರ್ಯ ಉಂಟಾಗುತ್ತದೆ.
ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ಈ ಪ್ರಪಂಚದಲ್ಲಿ ವ್ಯವಹರಿಸಲು ಉಪಯೋಗವಾಗುವಂತಹ ಹಲವಾರು ತಂತ್ರಗಳನ್ನು ತಿಳಿಸಿದ್ದಾರೆ. ಈ ಪುಸ್ತಕವು ಓದುಗರ ಚಾಣಾಕ್ಷತನವನ್ನು ಹೆಚ್ಚಿಸುತ್ತದೆ ಹಾಗೂ ಎಂತಹ ಕ್ಲಿಷ್ಟಕರ ಪರಿಸ್ಥಿಯನ್ನೂ ಸಹ ಗೆದ್ದು ಬರುವಂತಹ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಂದರೆ ಈ ಪುಸ್ತಕವನ್ನು ಓದಿದ ಬಳಿಕ ಹಾಗೂ ಇದರ ಸಾರಾಂಶವನ್ನು ಮನದಟ್ಟು ಮಾಡಿಕೊಂಡ ನಂತರ ಒಬ್ಬ ವ್ಯಕ್ತಿ ಈ ಪ್ರಪಂಚದಲ್ಲಿ ಎಂತಹ ಪರಿಸ್ಥಿಯನ್ನಾದರೂ ಸಮರ್ಥವಾಗಿ ಎದುರಿಸಬಲ್ಲವನಾಗುತ್ತಾನೆ.
ಈ ಪುಸ್ತಕವು ಆಸಕ್ತಿಕರ ಪ್ರಶ್ನೋತ್ತರಗಳ ಸರಮಾಲೆ. ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ಅತ್ಯಂತ ಆಸಕ್ತಿಕರವಾದ, ಮುಖ್ಯವಾದ ಹಾಗೂ ಉಪಯುಕ್ತವಾದ ಪ್ರಶ್ನೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ ಹಾಗೂ ಅವುಗಳಿಗೆ ಸೂಕ್ತ ಉತ್ತರವನ್ನು ನೀಡಿದ್ದಾರೆ. ಈ ಪುಸ್ತಕವು ಓದುಗರಲ್ಲಿ ಕುತೂಹಲವನ್ನು ಕೆರಳಿಸಿ ವಿವೇಕ, ಚಾಣಾಕ್ಷತನಗಳನ್ನು ವೃದ್ಧಿ ಮಾಡುತ್ತದೆ; ಹಾಗೂ ಅವರನ್ನು ಒಂದು ಹೊಸ ದೃಷ್ಟಿಕೋನದಿಂದ ಆಲೋಚಿಸುವಂತೆ ಮಾಡುತ್ತದೆ.
ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ಸಾರ್ಥಕ ಬದುಕೆಂದರೆ ಏನು ಎಂಬುದನ್ನು ವಿವರಿಸಿದ್ದಾರೆ ಹಾಗೂ ಬದುಕನ್ನು ಸಾರ್ಥಕ ಬದುಕನ್ನಾಗಿ ಮಾಡಿಕೊಳ್ಳಲು ಮಾರ್ಗಗಳನ್ನು ತಿಳಿಸಿದ್ದಾರೆ. ನಮ್ಮ ಬದುಕನ್ನು ಸಾರ್ಥಕ ಬದುಕನ್ನಾಗಿ ಮಾಡಿಕೊಳ್ಳಲು ಹಾಗೂ ಶಾಶ್ವತ ಲಾಭವನ್ನು ಗಳಿಸಲು ಈ ಪುಸ್ತಕವು ಒಂದು ಮಾರ್ಗದರ್ಶಿಯಾಗಿದೆ.
ಜ್ಞಾನಯೋಗಿ ಅವರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಸಧ್ಯ 22 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಈ 22 ಪುಸ್ತಕಗಳ ಪ್ಯಾಕೇಜ್ಗೆ "ಜ್ಞಾನನಿಧಿ" ಎಂದು ಹೆಸರಿಡಲಾಗಿದೆ. ಜ್ಞಾನಯೋಗಿ ಅವರು ಬರೆದಿರುವ 22 ಪುಸ್ತಕಗಳ ಈ ಪ್ಯಾಕೇಜ್ ನಿಜವಾಗಿಯೂ ಒಂದು ಜ್ಞಾನದ ಒಂದು ದೊಡ್ಡ ನಿಧಿ.