Share
Rs. 150/- #Bhavya #Gnanavruddhige #Badatanakke #vivekavardhaka #Balige #Makkala #Manovikasakke #Baligondu #Vedanta #Bruhat #Sumadhura Rs. 150/- #Uttama #Hanada #Gnananetra #adhyathmikachintanad #Prachanda #Manamuttuva_1 #Manamuttuva_2 #Sarala #Pralayantaka #Pragnavantara #Sarthaka #Manashantige
Gnanayogi.com
To get these meaningful books call, message or whatsapp to 9880790656 or email to info@gnanayogi.com
Home About Gnanayogi Our products order & parcel contact us Our Blog
Gnanayogi publication
No. 142, Balepete Main Road,
2nd cross, Bangalore-560053
Karnataka, India
Ph: 9880790656
Follow us
ಹೊಸ ಪ್ರಕಟಣೆಗಳ ಬಗೆಗಿನ ಮಾಹಿತಿಗಾಗಿ Subscribe ಮಾಡಿ
All rights Reserved: ©Gnanayogi.com

ಪುಸ್ತಕ ಪ್ರಿಯರೆ ಹಾಗೂ ಆಧ್ಯಾತ್ಮಿಕ ಆಸಕ್ತರೆ, ಇಲ್ಲಿದೆ ಜ್ಞಾನದ ಹೊಸದೊಂದು ಬೆಳಕು!

   ಜ್ಞಾನಯೋಗಿ ಎಂಬ ಹೊಸ ಲೇಖಕರು ಕೆಲವು ವರ್ಷಗಳಿಂದಲೂ ಕರ್ನಾಟಕದ ಜನರಲ್ಲಿ ಜ್ಞಾನದ ಅಗಾಧವಾದ ಬೆಳಕನ್ನು ಹರಡುತ್ತಿದ್ದಾರೆ. ಪ್ರತಿಯೊಬ್ಬ ಪುಸ್ತಕ ಪ್ರೇಮಿಯೂ, ಪ್ರತಿಯೊಬ್ಬ ಆಧ್ಯಾತ್ಮಿಕ ಆಸಕ್ತರೂಇವರ ಲೇಖನಗಳ ಬಗ್ಗೆ ಖಂಡಿತವಾಗಿಯೂ ತಿಳಿದುಕೊಳ್ಳಲೇಬೇಕು. ವ್ಯಕ್ತಿತ್ವ ವಿಕಾಸ ಮತ್ತು ಆಧ್ಯಾತ್ಮಿಕ ವಿಚಾರಗಳ ನಿಧಿ ಎಂದೇ ಜನಪ್ರಿಯವಾಗಿರುವ ಜ್ಞಾನಯೋಗಿ ಅವರ ಲೇಖನಗಳ ವಿಶೇಷತೆಯ ಬಗ್ಗೆ ಈಗ ಬಹಿರಂಗಪಡಿಸುತ್ತಿದ್ದೇವೆ. ಜ್ಞಾನಯೋಗಿ ಅವರು ಬರೆದಿರುವ ನೂರಕ್ಕೂ ಹೆಚ್ಚು ಕೃತಿಗಳಲ್ಲಿ ಇಲ್ಲಿಯವರೆಗೆ 23 ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ನಾವು ಪ್ರಕಟಿಸಿರುವ 23 ಪುಸ್ತಕಗಳಲ್ಲಿ ಎಲ್ಲವೂ 20 ನೇ ಮುದ್ರಣವನ್ನು ತಲುಪಿದ್ದು, ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿವೆ.

ಜ್ಞಾನಯೋಗಿ ಅವರ ಲೇಖನಗಳ ವಿಶೇಷತೆ

 ಜ್ಞಾನಯೋಗಿ ಅವರ ಬರಹಗಳು ಪ್ರತಿಯೊಬ್ಬ ಮನುಷ್ಯನಿಗೂ ಬದುಕಿರುವವರೆಗೆ ಹಾಗೂ ಬದುಕಿನ ನಂತರವೂ ಉಪಯೋಗವಾಗುವಂತಹ ವ್ಯಾಪಕವಾದ ವಿಚಾರಗಳನ್ನು ಒಳಗೊಂಡಿವೆ. ಆಧ್ಯಾತ್ಮಿಕ ವಿಚಾರ, ತಾತ್ವಿಕ ವಿಚಾರ, ಮನಸ್ಸು ಮತ್ತು ಬುದ್ಧಿಶಕ್ತಿ, ವೈವಾಹಿಕ ಜೀವನದ ಉಪಯುಕ್ತತೆ, ಮಕ್ಕಳ ವಿಚಾರ - ಹೀಗೆ ಇವರ ಲೇಖನಗಳಲ್ಲಿ ವ್ಯಾಪಕವಾದ ವಿಷಯಗಳ ಬಗ್ಗೆ ವಿವರಣೆಗಳನ್ನು ಕಾಣಬಹುದು. ಹೀಗೆ ಇವರ ಲೇಖನಗಳು ಓದುಗರ ಸರ್ವತೋಮುಖ ಅಭಿವೃದ್ಧಿಗೆ ಹೊಸ ಮಾರ್ಗದರ್ಶಿಯಾಗಿವೆ.

 ಪ್ರತಿಯೊಬ್ಬರೂ ಓದಲೇಬೇಕಾದ ಹಾಗೂ ಪ್ರತಿಯೊಂದು ಮನೆಯಲ್ಲಿಯೂ ಇರಲೇಬೇಕಾದ ಕೃತಿಗಳು ಈ ಜ್ಞಾನಯೋಗಿ ಅವರು ಬರೆದಿರುವ ಕೃತಿಗಳು. ಏಕೆಂದರೆ ಈ ಕೃತಿಗಳನ್ನು ಓದುವುದರಿಂದ ಏನೋ ಒಂದು ರೀತಿಯ ಉಲ್ಲಾಸ, ಉತ್ಸಾಹ, ಶಾಂತಿ, ತೃಪ್ತಿ, ಆನಂದ ಮತ್ತು ಸಂತೋಷಗಳು ಮನದಲ್ಲಿ ಹೆಚ್ಚಾಗುತ್ತವೆ. ಇದು ಆಂತರಿಕ ಬೆಳವಣಿಗೆಗೆ ದಾರಿಯಾಗುತ್ತದೆ. ಇವರು ತಮ್ಮ ಕೃತಿಗಳಲ್ಲಿ ಹೇಗೆ ಬದುಕಬೇಕು, ಹೇಗೆ ಬದುಕಬಾರದು; ಜೀವನವನ್ನು ಹೇಗೆ ಉಪಯುಕ್ತ ಹಾಗೂ ಅರ್ಥಪೂರ್ಣವನ್ನಾಗಿ ಮಾಡಿಕೊಳ್ಳಬಹುದು ಮುಂತಾದ ಅನೇಕ ವಿಚಾರಗಳನ್ನು ಬಹಳ ಸ್ಪಷ್ಟವಾಗಿ ಹಾಗೂ ಆಕರ್ಷಣೀಯವಾಗಿ ವಿವರಿಸಿದ್ದಾರೆ. ಆಧ್ಯಾತ್ಮಿಕ ವಿಚಾರಗಳನ್ನು ಬಹಳ ಸುಲಭವಾಗಿ ಮನದಾಳವನ್ನು ತಲುಪುವ ಹಾಗೆ ವಿವರಿಸುವ ವಿಶಿಷ್ಟ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಪ್ರತಿದಿನ ಕೇವಲ ಒಂದು ಪುಟವನ್ನು ಓದಿದರೂ ಸಾಕು, ಮನಸ್ಸು ಒಂದು ರೀತಿಯ ಹಗುರತೆ, ತೃಪ್ತಿ ಮತ್ತು ನೆಮ್ಮದಿಯನ್ನು ಹೊಂದುತ್ತದೆ.

 "ನಾವು ತಿನ್ನಲು ಬದುಕಬಾರದು, ಬದುಕಲು ತಿನ್ನಬೇಕು" - ಇದು ಅನೇಕ ಜನ ಬುದ್ಧಿವಂತರ ಹೇಳಿಕೆ. ಆದರೆ ನಾವು ಏತಕ್ಕೆ ಬದುಕಬೇಕು? ಎಂಬುವುದನ್ನು ಜ್ಞಾನಯೋಗಿ ಅವರ ಲೇಖನಗಳು  ನಮಗೆ ತಿಳಿಸುತ್ತವೆ. ನಮ್ಮ ಜೀವನವನ್ನು ಪ್ರಕಾಶಮಾನವಾಗಿ, ಆಸಕ್ತಿಕರವಾಗಿ, ಅರ್ಥಪೂರ್ಣವಾಗಿ ಮತ್ತು ಉಪಯುಕ್ತವಾಗಿ ಮಾರ್ಪಡಿಸುವಲ್ಲಿ ಜ್ಞಾನಯೋಗಿ ಅವರ ಕೃತಿಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ನಮ್ಮ ಬುದ್ಧಿಯನ್ನು ತೀಕ್ಷ್ಣಗೊಳಿಸಲು ಹಾಗೂ ವಿಶಾಲಗೊಳಿಸಲು ಜ್ಞಾನಯೋಗಿ ಅವರ ಬರಹಗಳು ಉತ್ತಮಸಾಧನವಾಗಿವೆ. ಇವರು ತಮ್ಮ ಕೃತಿಗಳಲ್ಲಿ ಅನೇಕ ವಿಚಾರಗಳನ್ನು ವಿವರಿಸಿದ್ದಾರೆ. ಆಧ್ಯಾತ್ಮಿಕ ವಿಚಾರ, ಮನಸ್ಸಿನ ವಿಚಾರ, ಜ್ಞಾನದ ವಿಚಾರ, ಹಣದ ವಿಚಾರ, ಪ್ರಗತಿಯ ವಿಚಾರ, ಧರ್ಮದ ವಿಚಾರ, ದೇವರ ವಿಚಾರ, ಹುಟ್ಟು ಸಾವಿನ ವಿಚಾರ, ಬದುಕುವ ಸರಿಯಾದ ರೀತಿ, ಆತ್ಮಾನುಭೂತಿ ಹಾಗೂ ಮುಕ್ತಿಯ ವಿಚಾರ - ಈ ರೀತಿಯ ಪ್ರತಿಯೊಬ್ಬ ಮನುಜನೂ ಅರಿತುಕೊಳ್ಳಲೇಬೇಕಾದ ಅನೇಕಾನೇಕ ವಿಚಾರಗಳನ್ನು ಇವರು ತಮ್ಮ ಬರವಣಿಗೆಗಳಲ್ಲಿ ವಿವರಿಸಿದ್ದಾರೆ. ಇವರ ಕೃತಿಗಳು ಮಾನವನಿಗೆ ಅವಶ್ಯಕವಾದ ಅನೇಕಾನೇಕ ವಿಚಾರಗಳ ನಿಧಿ ಎಂದೇ ಹೇಳಬೇಕು. ಇವರ ಕೃತಿಗಳು ಮಾನವ ಜೀವನವನ್ನು ಉಪಯುಕ್ತ ಹಾಗೂ ಅರ್ಥಪೂರ್ಣವಾಗಿಸಲು ಒಂದು ಉತ್ತಮ ಮಾರ್ಗದರ್ಶಿ.

ಜ್ಞಾನಯೋಗಿ ಅವರ ಉದ್ದೇಶ

ಪ್ರತಿಯೊಬ್ಬ ಮುನುಜನ ದುಃಖ, ಬಂಧನ, ತೊಂದರೆ, ನಷ್ಟ ಮತ್ತು ಅವನತಿಯನ್ನು ತೊಡೆದುಹಾಕಬೇಕೆಂದು ಜ್ಞಾನಯೋಗಿ ಅವರು ತಮ್ಮ ಹೃದಯಾಂತರಾಳದಿಂದ ಬಯಸುತ್ತಾರೆ. ಪ್ರತಿಯೊಬ್ಬ ಮಾನವನೂ ತನ್ನ ಆಂತರಿಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು, ಬುದ್ಧಿ, ವಿವೇಕ, ಆಧ್ಯಾತ್ಮಿಕ ಜ್ಞಾನ ಮುಂತಾದುವುಗಳನ್ನು ಅಭಿವೃದ್ಧಿ ಮಾಡಿಕೊಳ್ಳಬೇಕು ಹಾಗೂ ಪ್ರತಿಯೊಬ್ಬ ಮಾನವನೂ ಧರ್ಮಬದ್ಧವಾಗಿ ನಡೆದುಕೊಳ್ಳಬೇಕು ಎಂಬುವುದು ಇವರ ಮನದಾಳದ ಬಯಕೆ. ಶಾಶ್ವತವಾದ ಪ್ರಗತಿಯನ್ನು ಹೊಂದಬೇಕಾದರೆ ಪ್ರತಿಯೊಬ್ಬ ಮಾನವನೂ ದುಃಖರಹಿತವಾದ ಶಾಶ್ವತ ಆನಂದವನ್ನು ಪಡೆದುಕೊಳ್ಳಬೇಕು, ಅಂದರೆ ಆತ್ಮಸ್ಥಿತಿಯನ್ನು ಹೊಂದಬೇಕು ಎಂಬುವುದು ಅವರ ಇಚ್ಛೆ. ಪ್ರತಿಯೊಬ್ಬ ಮನುಜನನ್ನೂ ಆನಂದದ ಸಾಗರದಲ್ಲಿ ತೇಲುವಂತೆ ಮಾಡಬೇಕೆಂಬುವುದು ಇವರ ಮಹತ್ವಾಕಾಂಕ್ಷೆ.

ಇಲ್ಲಿಯವರೆಗಿನ ಜ್ಞಾನಯೋಗಿ ಅವರ ಸಾಧನೆ

ಜ್ಞಾನಯೋಗಿ ಅವರ ದೈನಂದಿನ ದಿನಚರಿಗಳು

  ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದರೂ, ಇನ್ನೂ ಬರೆಯುವುದನ್ನು ಮುಂದುವರೆಸಿದ್ದಾರೆ ಮತ್ತು ಆಗಾಗ ಧ್ಯಾನದಲ್ಲಿ ಮುಳುಗಿರುತ್ತಾರೆ. ಇದು ಜ್ಞಾನಯೋಗಿ ಅವರ ದೈನಂದಿನ ದಿನಚರಿ.

ಜ್ಞಾನಯೋಗಿ ಅವರ ಮುಂದಿನ ಯೋಜನೆಗಳು

 ಜ್ಞಾನಯೋಗಿ ಅವರು ಹೇಳುತ್ತಾರೆ ನಮ್ಮ ಎಲ್ಲಾ ಕಷ್ಟ, ದುಃಖ, ಬಾಧೆಗಳಿಗೆ ಕಾರಣ ನಮ್ಮ ಅಜ್ಞಾನ. ಜ್ಞಾನದ ಬೆಳಕನ್ನು ಪಡೆದು ನಮ್ಮ ಅಜ್ಞಾನದ ಕತ್ತಲನ್ನು ದೂರ ಮಾಡಿಕೊಂಡರೆ ನಮ್ಮೆಲ್ಲಾ ದುಃಖ, ಬಾಧೆ, ಸಮಸ್ಯೆಗಳು ತಮಗೆ ತಾವೇ ದೂರಾಗುತ್ತವೆ; ಸಮಸ್ಯೆಗಳಿದ್ದರೂ ಅವು ಸಮಸ್ಯೆಗಳಂತೆ ನಮಗೆ ಕಾಣುವುದಿಲ್ಲ.

  ಜ್ಞಾನವನ್ನು ಪಡೆಯುವುದು ಹಾಗೂ ದುಃಖವಿಲ್ಲದ, ಶಾಶ್ವತ ಆನಂದದ ಸ್ಥಿತಿಯಾದ ಆತ್ಮಸ್ಥಿತಿಯನ್ನು ಪಡೆಯುವುದು ಪ್ರತಿಯೊಬ್ಬ ಮಾನವನ ಜನ್ಮಸಿದ್ಧ ಅಧಿಕಾರ. ಜನ್ಮಸಿದ್ಧ ಅಧಿಕಾರವಲ್ಲ; ಜನ್ಮಕ್ಕಿಂತಲೂ ಮುಂದಿನ ಅಧಿಕಾರ. ಆದ್ದರಿಂದ ಜ್ಞಾನದ ಸವಿಯನ್ನು ಪ್ರತಿಯೊಬ್ಬರೂ ಸವಿಯಬೇಕು, ಅಜ್ಞಾನದ ಕತ್ತಲನ್ನು ಓಡಿಸಿ ಪ್ರತಿಯೊಬ್ಬರೂ ಶಾಶ್ವತವಾದ ಕರಗದ ಆನಂದವನ್ನು ಹೊಂದಬೇಕು ಎಂಬುವುದು ಇವರ ಅವರ ಬಯಕೆ.  ಆದ್ದರಿಂದ ಇವರು ತಮ್ಮ ಪುಸ್ತಕಗಳನ್ನು ಕನ್ನಡವೂ ಸೇರಿದಂತೆ ಐದು ಪ್ರಮುಖ ಭಾಷೆಗಳಲ್ಲಿ ಹೊರತರಲು ಯೋಚಿಸುತ್ತಿದ್ದಾರೆ. ಅಂದರೆ ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳ ಮುಕಾಂತರ ಜ್ಞಾನದ ಬೆಳಕು ಆದಷ್ಟೂ ಹೆಚ್ಚು ಜನರನ್ನು ತಲುಪಬೇಕು ಎಂಬುವುದು ಇವರ ಆಶಯ. ಕರ್ನಾಟಕದಲ್ಲಿ ಕನ್ನಡಿಗನಾಗಿ ಜನಿಸಿರುವ ಈ ಕಾಂತಿ ಕಿರಣ ಸಧ್ಯಕ್ಕೆ ಕರ್ನಾಟಕದಲ್ಲಿ ತನ್ನ ಬೆಳಕನ್ನು ಹರಡಲು  ಪ್ರಾರಂಭಿಸಿದೆ.ಬನ್ನಿ ಜ್ಞಾನಯೋಗಿ ಅವರ ಕೃತಿಗಳ ಬಗ್ಗೆ ತಿಳಿದುಕೊಳ್ಳೋಣ……