ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ಮನುಜ ತನ್ನ ಜೀವನದಲ್ಲಿ ಶಾಂತಿಯನ್ನೇಕೆ ಕಳೆದುಕೊಂಡಿದ್ದಾನೆ ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ ಹಾಗೂ ಮನಶ್ಶಾಂತಿಯನ್ನು ಪಡೆದುಕೊಳ್ಳಲು ಪರಿಣಾಮಕಾರಿ ಮಾರ್ಗಗಳನ್ನು ಸೂಚಿಸಿದ್ದಾರೆ. ಈ ಪುಸ್ತಕದಲ್ಲಿ ಅವರು ಮನಸ್ಸಿನ ಶಾಂತಿಯನ್ನು ಪಡೆಯಲು ಪರಿಣಾಮಕಾರಿ ಮಾರ್ಗಗಳನ್ನು ಸೂಚಿಸಿದ್ದಾರೆ. ಈ ಪುಸ್ತಕವು ಮನಸ್ಸಿನ ಶಾಂತಿಯನ್ನು ಪಡೆಯಲು ಒಂದು ಅಮೂಲ್ಯವಾದ, ಉತ್ತಮ ಸಾಧನ.
ತನ್ನ ಬದುಕು ಭವ್ಯ ಬದುಕಾಗಬೇಕೆಂದು ಬಯಸುವ ಪ್ರತಿಯೊಬ್ಬ ವ್ಯಕ್ತಿಯೂ ಈ ಪುಸ್ತಕವನ್ನು ಓದಲೇಬೇಕು. ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ವಾಸ್ತವವಾಗಿ ಭವ್ಯವಾದ ಬದುಕೆಂದರೆ ಏನು ಎಂಬುವುದನ್ನು ವಿವರಿಸಿದ್ದಾರೆ. ಈ ಪುಸ್ತಕವು ನಮ್ಮ ಜೀವನವನ್ನು ಉತ್ತಮ, ಅರ್ಥಪೂರ್ಣ ಹಾಗೂ ಸಾರ್ಥಕಗೊಳಿಸಿಕೊಳ್ಳಲು ಒಂದು ಉತ್ತಮ ಮಾರ್ಗದರ್ಶಿಯಾಗಿದೆ.
ಈ ಪುಸ್ತಕವು ಒಂದು ಜ್ಞಾನಧಾರೆಯಂತೆ. ಈ ಪುಸ್ತಕದಲ್ಲಿ ಜ್ಞಾನಯೋಗಿಯವರು ಅತ್ಯಂತ ಸರಳವಾಗಿ, ಆಕರ್ಷಕವಾಗಿ ಹಾಗೂ ಆಸಕ್ತಿಕರವಾಗಿ ಅದ್ಭುತ ವಿಚಾರಗಳನ್ನು ವಿವರಿಸಿದ್ದಾರೆ. ಈ ಪುಸ್ತಕವನ್ನು ಓದುವುದರಿಂದ ಓದುಗರು ಅತ್ಯಂತ ಸರಳವಾಗಿ ಹೆಚ್ಚು ಜ್ಞಾನವನ್ನು ಆರ್ಜಿಸಬಹುದು.
ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ಒಬ್ಬ ವ್ಯಕ್ತಿ ಬಡವನಾಗಿಯೇ ಉಳಿಯಲು ಕಾರಣವೇನು ಎಂಬುದನ್ನು ವಿವರಿಸಿದ್ದರೆ ಹಾಗೂ ಸಿರಿವಂತರಾಗಲು ಅತ್ಯಂತ ನಿಖರವಾದ ಹಾಗೂ ಪರಿಣಾಮಕಾರಿಯಾದ ಮಾರ್ಗಗಳನ್ನು ಸೂಚಿಸಿದ್ದಾರೆ. ಬಡತನದಿಂದ ಸಿರಿತನಕ್ಕೆ ಜಿಗಿಯಬೇಕೆಂದು ಬಯಸುವವರಿಗೆ ಈ ಪುಸ್ತಕವು ನಿಜವಾಗಿಯೂ ಒಂದು ವರದಾನ.
ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ವಿಚಾರಗಳನ್ನು ಹೇಗೆ ವಿವರಿಸಿದ್ದಾರೆಂದರೆ ಇದನ್ನು ಓದುತ್ತಿದ್ದಂತೆ ಓದುಗರಲ್ಲಿ ಅವರಿಗೇ ತಿಳಿಯದಂತೆ ವಿವೇಕವು ವೃದ್ಧಿಯಾಗುತ್ತಿರುತ್ತದೆ. ವಿವೇಕವನ್ನು ಹೆಚ್ಚಿಸಿಕೊಳ್ಳಲು ಈ ಪುಸ್ತಕವು ಒಂದು ಪರಿಣಾಮಕಾರಿ ಸಾಧನವಾಗಿದೆ.
ಈ ಪುಸ್ತಕವು ವಿವೇಕದ ಒಂದು ಧಾರೆ. ಅಂದರೆ ವಿವೇಕಭರಿತ ವಿಚಾರಗಳು ಈ ಪುಸ್ತಕದಲ್ಲಿ ಧಾರೆಯಂತೆ ಹರಿದಿವೆ. ಈ ಪುಸ್ತಕವನ್ನು ಓದುವುದರಿಂದ ನಮ್ಮಲ್ಲಿ ವಿವೇಕದ ಕಣ್ಣು ತೆರೆದುಕೊಳ್ಳುತ್ತದೆ. ಇದರಿಂದ ನಮ್ಮ ಜೀವನದಲ್ಲಿ ಯಾವುದು ಸಾರ್ಥಕವಾದುದು ಹಾಗೂ ಯಾವುದು ನಿರರ್ಥಕವಾದುದು ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ತಮ್ಮ ಮಕ್ಕಳನ್ನು ಸಮರ್ಥರನ್ನಾಗಿ, ಪ್ರತಿಭಾವಂತರನ್ನಾಗಿ ಹಾಗೂ ಸಾರ್ಥಕ ವ್ಯಕ್ತಿಗಳನ್ನಾಗಿ ಮಾಡಬೇಕೆಂದು ಬಯಸುವ ಪ್ರತಿಯೊಬ್ಬ ತಂದೆ ತಾಯಿಯರಿಗೂ ಅತ್ಯಂತ ಉಪಯುಕ್ತವಾದ ಹಾಗೂ ಪರಿಣಾಮಕಾರಿಯಾದ ಸಲಹೆಗಳನ್ನು ನೀಡಿದ್ದಾರೆ. ತಮ್ಮ ಮಕ್ಕಳನ್ನು ಅಪಾರವಾಗಿ ಪ್ರೀತಿಸುವ ಪ್ರತಿಯೊಬ್ಬ ತಂದೆತಾಯಿಯರಿಗೂ ಈ ಪುಸ್ತಕವು ಒಂದು ಉತ್ತಮ ಮಾರ್ಗದರ್ಶಿ.
ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ನಮ್ಮ ಮನಸ್ಸನ್ನು ವಿಕಸಿತ ಮಾಡಿಕೊಳ್ಳುವುದು ಹೇಗೆ ಎಂದು ಅತ್ಯಂತ ವಿವರವಾಗಿ ವಿವರಿಸಿದ್ದಾರೆ. ಒಮ್ಮೆ ನಮ್ಮ ಮನಸ್ಸು ವಿಕಸಿತವಾಯಿತೆಂದರೆ, ಅಂದರೆ ವಿಶಾಲವಾಯಿತೆಂದರೆ ನಮ್ಮ ಎಲ್ಲಾ ಸಮಸ್ಯೆಗಳೂ ಚಿಕ್ಕದಾಗಿ ಕಾಣತೊಡಗುತ್ತವೆ. ಮನಸ್ಸು ವಿಕಸಿತವಾಗುತ್ತಿದ್ದಂತೆ ಅದರ ಶಕ್ತಿಯು ಅಪಾರವಾಗಿ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ನಾವು ಅದ್ಭುತವಾದ ಕಾರ್ಯಗಳನ್ನು ಸಾಧಿಸಬಹುದು ಹಾಗೂ ನಮ್ಮ ಜೀವನದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಚಿಕ್ಕದೆಂಬಂತೆ ವ್ಯವಹರಿಸುತ್ತಾ, ಸುಲಭವಾಗಿ ಪರಿಹರಿಸಿಕೊಳ್ಳಬಹುದು.