ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ನಮ್ಮ ಜೀವನವು ಸುಖಮಯ, ಸಂತೋಷಮಯ ಹಾಗೂ ಸಾರ್ಥಕವಾಗಲು ಅತ್ಯಂತ ಅವಶ್ಯಕವಾಗಿರುವ ಹಲವಾರು ವಿಚಾರಗಳ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಈ ಪುಸ್ತಕವು ನಮ್ಮ ಜೀವನದಲ್ಲಿ ಹಾಗೂ ನಮ್ಮ ಮನಸ್ಸಿನಲ್ಲಿ ಬೆಳಕನ್ನು ತುಂಬುವುದು ಖಂಡಿತ.
ಆಧ್ಯಾತ್ಮಿಕ ಜ್ಞಾನವನ್ನು ಸುಲಭವಾಗಿ ಹಾಗೂ ಆಸಕ್ತಿಕರವಾಗಿ ಆರ್ಜಿಸಲು ಜ್ಞಾನಯೋಗಿ ಅವರು ಬರೆದಿರುವ ಈ ಪುಸ್ತಕವು ಬಹಳ ಸಹಾಯಕವಾಗಿದೆ. ಬಹಳಷ್ಟು ಜನರಿಗೆ ಆಧ್ಯಾತ್ಮಿಕ ವಿಚಾರ ಹಾಗೂ ವೇದಾಂತ ವಿಚಾರಗಳು ಸಾಧು ಸಂತರಿಗೆ, ಋಷಿ ಮುನಿಗಳಿಗೆ ಸಂಬಂಧಪಟ್ಟಿದ್ದು ಎಂಬ ತಪ್ಪು ಅಭಿಪ್ರಾಯವಿದೆ. ಆದರೆ ವಾಸ್ತವವಾಗಿ ಆಧ್ಯಾತ್ಮಿಕ ವಿಚಾರಗಳನ್ನು, ವೇದಾಂತ ವಿಚಾರಗಳನ್ನು ಅರಿಯಬೇಕಾಗಿರುವುದು ಪ್ರತಿಯೊಬ್ಬ ಮನುಜನ ಕರ್ತವ್ಯವಾಗಿದೆ. ಏಕೆಂದರೆ ಪ್ರತಿಯೊಬ್ಬ ಮನುಜನಲ್ಲಿಯೂ ಆತ್ಮ ಮತ್ತು ದೇಹ ಎರಡೂ ಇವೆ.
ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ವೇದಾಂತ ವಿಚಾರಗಳು ಹಾಗೂ ಆಧ್ಯಾತ್ಮಿಕ ವಿಚಾರಗಳ ಸವಿಯನ್ನು ಪರಿಚಯಿಸಿದ್ದಾರೆ. ಬಹಳಷ್ಟು ಜನರು ವೇದಾಂತ ವಿಚಾರ ಹಾಗೂ ಆಧ್ಯಾತ್ಮಿಕ ವಿಚಾರಗಳೆಂದರೇನೇ ಒಂದು ರೀತಿಯ ವಿರಕ್ತಿಯನ್ನು ಪ್ರದರ್ಶಿಸುತ್ತಾರೆ. ಆದರೆ ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ಆಧ್ಯಾತ್ಮಿಕ ವಿಚಾರಗಳನ್ನು ವಿಶ್ಲೇಷಿಸಿರುವ ವಿಧಾನವನ್ನು ಕಂಡ ಓದುಗರು ವೇದಾಂತ ಹಾಗೂ ಆಧ್ಯಾತ್ಮಿಕ ವಿಚಾರಗಳೂ ಸಹ ಇಷ್ಟೊಂದು ಆಸಕ್ತಿಕರ ಹಾಗೂ ಆಹ್ಲಾದಕರವಾಗಿರುತ್ತದೆಯೆ! ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ಬಗೆ ಬಗೆಯ ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಈ ಪುಸ್ತಕವು ಓದುಗರ ಸರ್ವತೋಮುಖ ಅಭಿವೃದ್ಧಿಗೆ ಒಂದು ಒಳ್ಳೆಯ ಮೆಟ್ಟಿಲು. ಇದು ಜ್ಞಾನದ ಒಂದು ದೊಡ್ಡ ಗಣಿ ಎಂದೇ ಹೇಳಬೇಕು.
ಜ್ಞಾನಯೋಗಿ ಅವರು ಈ ಪುಸ್ತಕದಲ್ಲಿ ದಾಂಪತ್ಯ ಜೀವನದ ಅಮೂಲ್ಯತೆಯನ್ನು, ಪಾವಿತ್ರ್ಯತೆಯನ್ನು ಕುರಿತು ಹೇಳಿದ್ದಾರೆ ಹಾಗೂ ಗಂಡ-ಹೆಂಡತಿಯರ ನಡುವೆ ಪ್ರೀತಿ ಅನ್ಯೋನ್ಯತೆ, ಆತ್ಮೀಯತೆಗಳು ವೃದ್ಧಿಯಾಗಲು ಹಲವಾರು ಮಾರ್ಗಗಳನ್ನು ತಿಳಿಸಿದ್ದಾರೆ. ಗಂಡ-ಹೆಂಡತಿಯರು ಒಂದು ಕುಟುಂಬದ ಬೆನ್ನೆಲುಬಾಗಿರುತ್ತಾರೆ. ಅವರ ನಡುವೆ ಪ್ರೀತಿ ಹಾಗೂ ಅನ್ಯೋನ್ಯತೆಗಳಿದ್ದರೆ ಇಡೀ ಕುಟುಂಬವೇ ಸುಖ, ಸಂತೋಷ, ಶಾಂತಿಗಳಿಂದ ತುಂಬಿರುತ್ತದೆ.
ಒಬ್ಬ ನಿಜವಾದ ವಿವೇಕಿ ಎಂದೂ ಸಾಮಾನ್ಯವಾದ ಬದುಕನ್ನು ಬದುಕಲು ಇಷ್ಟಪಡುವುದಿಲ್ಲ. ಅವನು ತನ್ನ ಬದುಕು ಉತ್ತಮವಾಗಿರಬೇಕು, ಸಾರ್ಥಕವಾಗಿರಬೇಕು ಹಾಗೂ ಅರ್ಥಪೂರ್ಣವಾಗಿರಬೇಕು ಎಂದು ಬಯಸುತ್ತಾನೆ. ಅಂತಹ ವಿವೇಕವಂತರಿಗೆ ಈ ಪುಸ್ತಕವು ನಿಜವಾಗಿಯೂ ಒಂದು ಉತ್ತಮ ಮಾರ್ಗದರ್ಶಿ. ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ನಮ್ಮ ಬದುಕನ್ನು ಉತ್ತಮ ಹಾಗೂ ಸಾರ್ಥಕ ಬದುಕನ್ನಾಗಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿದ್ದಾರೆ.
ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ಹಣದ ನಿಜವಾದ ಸ್ವರೂಪ ಏನೆಂಬುದನ್ನು ವಿವರಿಸಿದ್ದಾರೆ. ಈ ಪುಸ್ತಕವು ಓದುಗರಿಗೆ ಹಣದ ಬಗ್ಗೆ ಒಂದು ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಈ ಪುಸ್ತಕವು ಬಡವರು ಹಾಗೂ ಸಿರಿವಂತರು ಇಬ್ಬರಿಗೂ ಬಹಳ ಉಪಯುಕ್ತವಾದುದಾಗಿದೆ. ಏಕೆಂದರೆ ಇದು ಕೇವಲ ಹಣವನ್ನು ಹೇಗೆ ಸಂಪಾದಿಸಬೇಕೆಂದು ಮಾತ್ರವೇ ತಿಳಿಸುವುದಿಲ್ಲ; ಬದಲಾಗಿ ಸಂಪಾದಿಸಿದ ಆ ಹಣವನ್ನು ಹೇಗೆ ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಎಂಬುದನ್ನೂ ತಿಳಿಸುತ್ತದೆ.
ನಮ್ಮ ಜೀವನದಲ್ಲಿ ಎಲ್ಲಾ ರೀತಿಯ ಕಷ್ಟಗಳಿಗೂ ಹಾಗೂ ಸಮಸ್ಯೆಗಳಿಗೂ ಕಾರಣ ಅಜ್ಞಾನ. ನಾವು ಜ್ಞಾನವನ್ನು ಆರ್ಜಿಸಿದರೆ ನಮ್ಮ ಜೀವನದಲ್ಲಿ ಉದ್ಭವಿಸುವ ಎಲ್ಲಾ ಕಷ್ಟಗಳು ಹಾಗೂ ಸಮಸ್ಯೆಗಳನ್ನೂ ಸುಲಭವಾಗಿ ಎದುರಿಸಬಹುದು ಹಾಗೂ ಪರಿಹರಿಸಿಕೊಳ್ಳಬಹುದು. ಜ್ಞಾನಯೋಗಿ ಅವರು ಬರೆದಿರುವ ಈ ಪುಸ್ತಕವು ನಮ್ಮಲ್ಲಿ ಜ್ಞಾನ ಉದಯಿಸುವಂತೆ ಮಾಡುತ್ತದೆ. ಪರಿಣಾಮವಾಗಿ ನಮಗೆ ನಮ್ಮ ಸಮಸ್ಯೆಗಳು ಬೆಳಕಿನಲ್ಲಿ ವಸ್ತುಗಳು ಕಾಣುವಷ್ಟು ಸ್ಪಷ್ಟವಾಗಿ ಕಾಣುತ್ತವೆ, ಅವು ನಮ್ಮ ಬಳಿಗೆ ಬರುವ ಮುನ್ನವೇ ಕಾಣುತ್ತವೆ. ಇದರಿಂದ ನಾವು ಆ ಕಷ್ಟಗಳು ನಮ್ಮನ್ನು ತಲುಪುವುದರೊಳಗೆ ಅದನ್ನು ಅರಿತು ಬಗೆಹರಿಸಿಕೊಂಡುಬಿಡಬಹುದು.